ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು :“ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಮಾಲೋಚನಾ ಸಭೆ”

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ, (ಆರ್.ಡಿ.ಪಿ.ಆರ್.)
ಮಂಗಳೂರು ತಾಲೂಕು ಸಮಿತಿ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು :“ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಮಾಲೋಚನಾ ಸಭೆ”

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್) ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ದಿನಾಂಕ 19-09-2017 ರಂದು ಕಿನ್ನಿಗೊಳಿಯ ಯುಗ ಪುರುಷ ಸಭಾಂಗಣದಲ್ಲಿ “ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ” ಸಮಾಲೋಚನಾ ಸಭೆಯು ನಡೆಯಿತು. ಸಭೆಯಲ್ಲಿ ಯುಗಪುರುಷ ಮುದ್ರಣಾಲಯ ಕಿನ್ನಿಗೋಳಿಯ ಸಂಪದಾಕರು ಶ್ರೀ ಭುವಾನಾಭಿರಾಮ ಉಡುಪ ರವರು ಉಪಸ್ಥಿತರಿದ್ದು ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘದ ಕಾರ್ಯವೈಖರಿ ಮತ್ತು ದ್ಯೇಯೋಧ್ಧೇಶದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಂಘಟನೆ ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವದರ ಜೊತೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಈ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು, ಮತ್ತು ಶ್ರೀ ದೇವಿ ಪ್ರಸಾದ್ ಬೊಳ್ಮರಿಗೆ ಮಂಗಳೂರು ತಾಲೂಕು ಸಮಿತಿ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳ ಪರವಾಗಿ ಪ್ರೀತಿ ಪೂರ್ವಕವಾಗಿ ಸನ್ಮಾನ ಮಾಡಿದರು,




ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್) ರಾಜ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಬೊಳ್ಮ ರವರು ಗ್ರಾಮ ಪಂಚಾಯತ್ ನೌಕರರು ನಮ್ಮ ಕಾರ್ಯನಿರ್ವಹಣೆಯೊಂದಿಗೆ ಗ್ರಾಮ ಪಂಚಾಯತಿನ ಸ್ವಂತ ಸಂಪನ್ಮೂಲ ಕ್ರೂಡಿಕರಣಕ್ಕೆ ಒತ್ತು ನೀಡಬೇಕು ಮತ್ತು ಗ್ರಾಮ ಪಂಚಾಯತಿನ ಸ್ವಂತ ಸಂಪನ್ಮೂಲ ಹೆಚ್ಚಳ ಮಾಡುವಲ್ಲಿ ಗ್ರಾಮ ಪಂಚಾಯತ್ ನೌಕರರ ಪಾತ್ರ ಮಹತ್ವವಾಗಿದ್ದು, ಯಾವುದೇ ನಮ್ಮ ಸಮಸ್ಯೆಗಳ ಕುರಿತು ಪ್ರತಿಭಟನೆ ಮುಷ್ಕರ ಹೋರಾಟದ ಹೆಸರಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತೀಯ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ವರ್ತಿಸಬಾರದು. ನಮ್ಮ ಮಾತೃ ಇಲಾಖೆಯ ಗೌರವಕ್ಕೆ ದಕ್ಕೆ ಬರದ ರೀತಿಯಲ್ಲಿ ಹೋರಾಟ ಪ್ರತಿಭಟನೆ ಮಾಡದೇ ನಮ್ಮ ಬೇಡಿಕೆಗಳನ್ನು ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಮ್ಮ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳೋಣ ಗ್ರಾಮ ಪಂಚಾಯತ್ ನೌಕರರಿಗೆ ಮಾನ್ಯ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಂಪೂರ್ಣ ಸಹಕಾರ ಇರುವಾಗ ಗ್ರಾಮ ಪಂಚಾಯತ್ ನೌಕರರ ಸೇವಾ ನಿಯಾಮವಳಿ ರೂಪಗೊಳ್ಳುವ ದಿನಗಳು ದೂರ ಇಲ್ಲ, ನಾವುಗಳೆಲ್ಲ ಒಂದು ಕುಟುಂಬ ಇದ್ದಂತೆ ನಮ್ಮ ಸಮಸ್ಯೆಗಳನ್ನು ಮಾನ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಹಾರ್ಧಯುತವಾಗಿ ಪರಿಹಾರ ಕಂಡುಕೊಳ್ಳೋಣ ಎಂದು ಈ ಸಂದರ್ಭದಲ್ಲಿ ತಿಳಿಸಿದರು.





ಮತ್ತು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್)ನ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್) ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷರಾದ ಸೈಫುಲ್ಲಾ ನಲ್ಲೂರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್) ಬೆಳ್ತಂಗಡಿ ತಾಲೂಕು ಸಮಿತಿಯ ಕಾರ್ಯದರ್ಶಿ ಸತೀಶ್ ಪಿ ವಿ ಹೊಸಂಗಡಿ, ಪದಾಧಿಕಾರಿಗಳಾದ ಸತೀಶ ನಾರಾವಿ, ಸತೀಶ್ ಉಜಿರೆ, ರೋಹಿಣಿ ಶೆಟ್ಟಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್) ಮಂಗಳೂರು ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಆಶ್ರಫ್ ಮತ್ತು ಪದಾಧಿಕಾರಿಗಳು, ಬಂಟ್ವಾಳ ತಾಲೂಕಿನ ಬಡಗಕಜೆಕಾರು ಶ್ರೀ ಮೋಹನ ಮತ್ತು ಕೇಪು ಶ್ರೀ ಸುರೇಶ್ ನಾಯ್ಕ್ ಕೆ , ಮೂಡುಬಿದ್ರೆಯ ಶ್ರೀ ಯಶೋಧರ , ಮತ್ತು ಮಂಗಳೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ನೌಕರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಬೆಳ್ತಂಗಡಿ, ಕಾರ್ಕಳ ಮತ್ತು ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್) ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಯವರು ಸ್ವಾಗತಿಸಿ, ಕಿಶೋರ್ ಪಡುಮಾರ್ನಾಡು ಕಾರ್ಯಕ್ರಮದಲ್ಲಿ ಗತ ಸಭೆಯ ವರದಿ ವಾಚಿಸಿದರು, ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್) ಮಂಗಳೂರು ತಾಲೂಕು ಸಮಿತಿಯ ಶ್ರೀಮತಿ ರೇವತಿ ನಿರೂಪಿಸಿ, ರಾಜು ಪಡುಮಾರ್ನಾಡು ದನ್ಯವಾದ ಸಮರ್ಪಿಸಿದರು.










“ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ” ಮಂಗಳೂರು ಸಮಾಲೋಚನಾ ಸಭೆಯಲ್ಲಿ ಮಂಡನೆಯಾದ ಬೇಡಿಕೆಗಳು :

•ಈಗಾಗಲೇ ಗ್ರಾಮ ಪಂಚಾಯತ್ ನೌಕರರಿಗೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಅಧಿನಿಯಮದಡಿ ವೇತನ ನಿಗದಿ ಪಡಿಸಿ ಕನಿಷ್ಠ ವೇತನ ಪಾವತಿಸುತ್ತಿದ್ದು, ಈ ವ್ಯವಸ್ಥೆಯನ್ನು ತೆಗೆದು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಗೂ ನೇರವಾಗಿ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ವೇತನ ಶ್ರೇಣಿ ನಿಗದಿ ಪಡಿಸಿ ವೇತನ ನೀಡುವ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಗ್ರಾಮ ಪಂಚಾಯತ್ ನೌಕರರಿಗೆ ನಗರ ಮತ್ತು ಪಟ್ಟಣ ಪಂಚಾಯತ್ ನೌಕರರಿಗಿರುವ ಮಾದರಿಯಲ್ಲಿ ಸೇವಾ ನಿಯಾಮಾವಳಿ ರೂಪಿಸಿ, ಗ್ರಾಮ ಪಂಚಾಯತ್ ನೌಕರರಿಗೆ ವರ್ಗಾವಣೆ ಸವಲತ್ತು ನೀಡಿ, ಸೂಕ್ತ ಸೇವಾ ಭದ್ರತೆಯನ್ನು ಒದಗಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವುದು.

•ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸೂಕ್ತ ಸೇವಾ ನಿಯಾಮವಳಿ ರೂಪಗೊಳ್ಳುವರೆಗೂ ಕಾರ್ಮಿಕ ಇಲಾಖೆ ನಿಗದಿ ಪಡಿಸಿದ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಅನುದಾನ ಕೊರತೆ ನೆಪದಲ್ಲಿ ಹಾಗೂ ಇತರೆ ಕಾರಣಗಳಿಗಾಗಿ ಸಿಬ್ಬಂದಿಗಳಿಗೆ ವೇತನ ಪಾವತಿಸದೇ ಇರುವುದು ತುಂಬಾ ದುಃಖಕರ ಸಂಗತಿ ಈ ಬಗ್ಗೆ ಕ್ರಮ ಕೈಗೊಂಡು ಕಡ್ಡಾಯವಾಗಿ ಕನಿಷ್ಠ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು.

•ಗ್ರಾಮ ಪಂಚಾಯತ್ ನೌಕರರ ಸೇವೆಗೆ ತಕ್ಕ ವೇತನ ಪಾವತಿಸಬೇಕು ಹಾಗೂ 20 ವರ್ಷ ಕಚೇರಿಯಲ್ಲಿ ಸೇವೆ ಸಲ್ಲಿಸಿದ ನೌಕರರಿಗೂ 1 ವರ್ಷ ಕಚೇರಿಯಲ್ಲಿ ಸೇವೆ ಸಲ್ಲಿಸಿದ ನೌಕರರಿಗೂ ಏಕರೂಪ ವೇತನ ಪಾವತಿಸುತ್ತಿದ್ದು, ಈ ಬಗ್ಗೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು.

•ಸರಕಾರದ ಆದೇಶ ದಿನಾಂಕ : 10-09-2014ರ ಪೂರ್ವದಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಅವರ ವಿಧ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸದೇ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅನುಮೋದನೆ ನೀಡುವ ಕುರಿತು ಕ್ರಮ ಕೈಗೊಳ್ಳುವುದು. ಆದೇಶ ಹೊರಡಿಸಿದ ನಂತರದ ಎಲ್ಲಾ ಗ್ರಾಮ ಪಂಚಾಯತಿನ ಸಿಬ್ಬಂದಿಗಳ ನೇಮಕಾತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅನುಮೋದನೆ ನೀಡುವುದು.

•ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅವರು ನಿರ್ವಹಿಸುತ್ತಿರುವ ಹುದ್ದೆಯ ಬದಲಿ ಇತರ ಹುದ್ದೆಗೆ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಲಾಗಿದೆ ಇದನ್ನು ಸರಿಪಡಿಸಿ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗೇ ಅನುಮೋದನೆ ನೀಡಬೇಕು. 

•ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ನೌಕರರ ಜೇಷ್ಠತ ಪಟ್ಟಿಯಲ್ಲಿ ಆದ ಲೋಪಗಳನ್ನು ಸರಿಪಡಿಸಿ ನಿಷ್ಠಾವಂತ ನೌಕರರ ಹಿತಕಾಯಬೇಕು.

•ಗುಮಾಸ್ತ ಹುದ್ದೆಯಿಂದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಕರವಸೂಲಿಗಾರರಿಂದ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಬಡ್ತಿ ಹೊಂದಲು ಅರ್ಹರಾಗಿರುವ ಗುಮಾಸ್ತರು ಮತ್ತು ಕರವಸೂಲಿಗಾರರಿಗೆ ಮುಂಬಡ್ತಿ ನೀಡಬೇಕು.

•ಸರಕಾರವು ಘೋಷಿಸಿರುವ ಪ್ರತಿ ಗ್ರಾಮ ಪಂಚಾಯತಿಗೊಂದರಂತೆ ಹೆಚ್ಚುವರಿ ಡಾಟ ಎಂಟ್ರೀ ಅಪರೇಟರ್ ಒದಗಿಸುವ ಕುರಿತು ಸೂಕ್ತ ಸ್ಪಷ್ಟೀಕರಣ ನೀಡುವುದು.

•ಈಗಾಗಲೇ ಗ್ರಾಮ ಪಂಚಾಯತ್‍ಗಳಿಗೆ ಹಲವು ಇಲಾಖೆಗಳ ಕೆಲಸ ಕಾರ್ಯಗಳನ್ನು ಒದಗಿಸಿ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಮೂಲಕ ಎಲ್ಲಾ ಸೇವೆಗಳನ್ನು ಗ್ರಾಮದ ಜನರಿಗೆ ನೀಡುತಿದ್ದು, ಗ್ರಾಮ ಪಂಚಾಯತಿನ ಸಿಬ್ಬಂದಿಗಳಿಗೆ ಕೆಲಸದ ಒತ್ತಡವು ಹೆಚ್ಚಾದ ಕಾರಣ ಸಾರ್ವಜನಕರಿಗೆ ಸೂಕ್ತ ಸಮಯದಲ್ಲಿ ಸೇವೆ ನೀಡುವ ಹಿತದೃಷ್ಟಿಯಿಂದ ಆಡಳಿತ ಮಂಡಳಿಗಳು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಈಗಾಗಲೇ ಹೆಚ್ಚುವರಿ ಕಂಪ್ಯೂಟರ್ ಅಪರೇಟರ್‍ಗಳನ್ನು ನೇಮಕಾತಿ ಮಾಡಿಕೊಂಡು ಸಾರ್ವಜನಿಕರಿಗೆ ಪಡಿತರ ಚೀಟಿ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸೂಕ್ತ ಸೇವೆಯನ್ನು ಸರಿಯಾದ ಸಮಯದಲ್ಲಿ ನೀಡುತ್ತಿದ್ದು, ಗ್ರಾಮ ಪಂಚಾಯತಿನ ಒತ್ತಡದ ಕಾರ್ಯಗಳನ್ನು ನಿರ್ವಹಿಸುತ್ತಿರುವ ಹೆಚ್ಚುವರಿ ಕಂಪ್ಯೂಟರ್ ಅಪರೇಟರ್ ಸಿಬ್ಬಂದಿಗಳನ್ನೆ ಮುಂದಿನ ದಿನಗಳಲ್ಲಿ ಇತರ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮ ಪಂಚಾಯತಿನ ಕಾರ್ಯಕ್ಕೆ ನೇಮಕಾತಿ ಪ್ರಕ್ರೀಯೆ ನಡೆಸುವ ಸಂದರ್ಭದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು.

•ವಿದ್ಯಾರ್ಹತೆ ಹೊಂದಿರುವ ಪಂಪು ಚಾಲಕರಿಗೆ ಸೇವಾ ಹಿರಿತನ ಮೇಲೆ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಬೇಕು.

• ಇತರೆ ಇಲಾಖೆಯ ಕಾರ್ಯಗಳನ್ನು ಗ್ರಾಮ ಪಂಚಾಯತ್ ಗೆ ನೀಡುವ ಮೊದಲು ಸದ್ರಿ ಕಾರ್ಯ ನಿರ್ವಹಿಸಲು ಸೂಕ್ತ ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಲಭ್ಯ ಒದಗಿಸಬೇಕು.



ಪುಷ್ಪ ಶೆಟ್ಟಿ  (ಅಧ್ಯಕ್ಷರು)
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘ (ಆರ್.ಡಿ.ಪಿ.ಆರ್)
ಮಂಗಳೂರು ತಾಲೂಕು ಸಮಿತಿ.



ಸ್ಥಳ : ಕಿನ್ನಿಗೋಳಿ                 ದಿನಾಂಕ: 19-09-2017

Comments

  1. Play online casino games for free without registration - Kadang
    Online gambling is a form of gambling in which you do not have to deposit any money into a casino account. 온카지노 먹튀 However, to

    ReplyDelete

Post a Comment